ದಾಂಡೇಲಿ : ಕೆಎಸ್ಎಫ್ಐಸಿಯಡಿ ನಗರದಲ್ಲಿ ನಿರ್ಮಾಣಗೊಂಡಿದ್ದ 172 ಮನೆಗಳಲ್ಲಿರುವ ಕಾರ್ಮಿಕರ ಕುಟುಂಬಗಳನ್ನು ತೆರವುಗೊಳಿಸದಂತೆ ಹಾಗೂ ಈ ಕುಟುಂಬಗಳಿಗೆ ಖಾಯಂ ಮನೆ ಸೌಲಭ್ಯ ಒದಗಿಸುವಂತೆ ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯ ಡಿ.ಸ್ಯಾಮಸನ್ ಅವರು ಶಾಸಕರು ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆಯವರಿಗೆ ಲಿಖಿತ ಮನವಿಯ ಜೊತೆಗೆ ಗುರುವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ನಗರದಲ್ಲಿ ಮಾಧ್ಯಮದ ಮೂಲಕ ಮನವಿಯನ್ನು ಮಾಡಿದ್ದಾರೆ. ಕೆಎಸ್ಎಫ್ಐಸಿ ಇಲಾಖೆಯು ಅರಣ್ಯ ಇಲಾಖೆಯ ಕೈಗಾರಿಕಾ ಇಲಾಖೆಗೆ ಸಂಬಂಧಿಸಿರುವುದಾಗಿದ್ದು, ಇದು ಆರಂಭಿಕ ದಿನಗಳಲ್ಲಿ ಕಟ್ಟಿಗೆ ಉದ್ದಿಮೆಯಾಗಿತ್ತು.