ಕಲಬುರಗಿ: ನಗರದ ತಮ್ಮ ನಿವಾಸದಲ್ಲಿ ಜನಸ್ಪಂದನ ನಡೆಸಿದ ಶಾಸಕ ಬಸವರಾಜ್ ಮತ್ತಿಮೂಡ್
ಕಲಬುರಗಿ : ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮೂಡ್ ಅವರು ಇಂದು ತಮ್ಮ ನಿವಾಸದಲ್ಲಿ ಜನಸ್ಪಂದನ ನಡೆಸಿದರು.. ನವೆಂಬರ್ 10 ರಂದು ಬೆಳಗ್ಗೆ 11 ಗಂಟೆಗೆ ಕಲಬುರಗಿ ನಗರದ ಓಂ ನಗರ ಬಡಾವಣೆಯಲ್ಲಿ ತಮ್ಮ ಕ್ಷೇತ್ರದಿಂದ ಬಂದಿದ್ದ ಜನರ ಸಮಸ್ಯೆಗಳನ್ನ ಆಲಿಸಿದರು.. ಇನ್ನೂ ಕೆಲ ಸಮಸ್ಯೆಗಳನ್ನ ಸ್ಥಳದಲ್ಲೆ ಅಧಿಕಾರಿಗಳಿಗೆ ಕರೆ ಮಾಡಿ ಬಗೆಹರಿಸಿದ್ರೆ ಕೆಲವೊಂದು ಸಮಸ್ಯೆಗಳನ್ನ ಬಗೆಹರಿಸೋದಾಗಿ ಭರವಸೆ ನೀಡಿದರು.