ಬೆಂಗಳೂರು ಉತ್ತರ: ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಸ್ಕೂಟರ್ - ಬೈಕ್ ನಡುವೆ ಅಪಘಾತ ; ಯುವಕನ ಮೆದುಳು ನಿಷ್ಕ್ರಿಯ, ಯುವತಿಗೆ ಗಾಯ
ಸ್ಕೂಟರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಯುವಕನ ಮೆದುಳು ನಿಷ್ಕ್ರಿಯಗೊಂಡ ಘಟನೆ ಅಕ್ಟೋಬರ್ 1ರಂದು ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರಸ್ತೆಯ ರಾಜಾಜಿ ನಗರ ಮೆಟ್ರೊ ನಿಲ್ದಾಣದ ಬಳಿ ಸಂಭವಿಸಿದೆ.ಬೈಕ್ ಸವಾರ ವಿನಯ್ ಮೆದುಳು ನಿಷ್ಕ್ರಿಯವಾಗಿದೆ. ಸ್ಕೂಟರ್ ಚಲಾಯಿಸುತ್ತಿದ್ದ ಸಿರಿ ಎಂಬ ಯುವತಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಿಗ್ಗೆ 8 ಗಂಟೆ ಸುಮಾರಿಗೆ ಬಸವೇಶ್ವರ ನಗರದಿಂದ ಮಹಾಲಕ್ಷ್ಮೀ ಲೇಔಟ್ ಮಾರ್ಗವಾಗಿ ಸ್ಕೂಟರ್ನಲ್ಲಿ ಸಿರಿ ತೆರಳುತ್ತಿದ್ದರು. ಅದೇ ಮಾರ್ಗದಲ್ಲಿ ಅತಿವೇಗವಾಗಿ ಬಂದಿದ್ದ ವಿನಯ್ನ ಬೈಕ್, ಯುವತಿ ಸಿರಿಯ ಸ್ಕೂಟರ್ಗೆ ಡಿಕ್ಕಿಯಾಗಿತ್ತು. ಹೆಲ್ಮೆಟ್ ಧರಿಸದ ಕಾರಣ ತೀವ್ರವಾಗಿ ತಲೆಗೆ ಪೆಟ್ಟಾಗಿದ್ದರಿಂದ ವಿನಯ್ನನ್ನ ಸಮೀಪದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು.