ಲಿಂಗಸೂರು: ತಾಲ್ಲೂಕಿನಲ್ಲಿ ಮಂದಗತಿಯ ಕಾಮಗಾರಿ ಸಾರ್ವಜನಿಕರಿಗೆ ಕಿರಿಕಿರಿ, ಜೀವಭಯ
ಲಿಂಗಸುಗೂರು ಪಟ್ಟಣದಲ್ಲಿ ನಡೆಯುತ್ತಿರುವ ಜಲಧಾರೆ ಯೋಜನೆಯ ಪೈಪ್ಲೈನ್ ಕಾಮಗಾರಿ ಅರೆಬರೆ ಮಾಡುತ್ತಿರುವ ಹಿನ್ನಲೆ ಜನರ ಒಡಾಟಕ್ಕೆ ಕಿರಿಕಿರಿ ಉಂಟಗಿದ್ದು, ವಾಹನ ಸವಾರರು ಜೀವಭಯದಲ್ಲೆ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೃಹತ್ ಪೈಪ್ಗಳನ್ನು ಅಳವಡಿಸುವ ಕಾಮಗಾರಿ ಜನರಿಗೆ ಕಿರಿಕಿರಿ ಉಂಟು ಮಾಡಿದೆ. ಜನನಿಬಿಡ ಪ್ರದೇಶದಲ್ಲಿ ಕಾಮಗಾರಿಗಾಗಿ ಸುಮಾರು 10-15 ಅಡಿ ಆಳದವರೆಗೆ ನೆಲ ಅಗೆಯಲಾಗುತ್ತಿದೆ. ಅಗೆದ ನೆಲವನ್ನು ಸರಿಯಾಗಿ ಮುಚ್ಚದೇ ಬಿಟ್ಟ ಕಾರಣ ಆ ಜಾಗದಲ್ಲಿ ದೊಡ್ಡ ಗುಂಡಿ ಬಿದ್ದಿದ್ದು ವಾಹನ ಸವಾರರು, ಜೀವಭಯದಲ್ಲಿ ಓಡಾಡುವಂತಾಗಿದೆ.