ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಯ ಬಗ್ಗೆ ಅಂಜಲಿ. ಎಂಬ ಮಹಿಳೆ 750 ಮೀಟರ್ ಪ್ರಯಾಣಕ್ಕೆ 21 ನಿಮಿಷ ತೆಗೆದುಕೊಂಡ ಅನುಭವವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಕಳೆದ ವಾರ ಇನ್ಸಾಗ್ರಾಮ್ನಲ್ಲಿ ಹಂಚಿಕೊಂಡ ಈ ವಿಡಿಯೋ, ಕಾರಿನೊಳಗಿನಿಂದ ರೆಕಾರ್ಡ್ ಮಾಡಲಾಗಿದ್ದು, ವಾಹನದ ಮ್ಯಾಪ್ನಲ್ಲಿ 750 ಮೀಟರ್ಗೆ 21 ನಿಮಿಷ ತೋರಿಸುತ್ತಿದೆ. ಈ ವಿಡಿಯೋ ನಗರದ ಭೀಕರ ಟ್ರಾಫಿಕ್ ಸಮಸ್ಯೆಯನ್ನು ಎತ್ತಿ ತೋರಿಸಿದ್ದು, ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.