ಹಳಿಯಾಳ : ಜನಸ್ನೇಹಿ ಮಾಜಿ ಸೈನಿಕರಾದ ರಾಜು ಮಾರುತಿ ಪೆಜೋಳ್ಳಿ ಅವರ ಆಶ್ರಯದಲ್ಲಿ ಹಳಿಯಾಳ ಪಟ್ಟಣದ ಧಾರವಾಡ ಮಾರ್ಗದ ವಿಶಾಲ ಮೈದಾನದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಗೆ ಭಾನುವಾರ ಮಧ್ಯಾನ 2.30 ಗಂಟೆ ಸುಮಾರಿಗೆ ಶಾಸಕರು ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ. ದೇಶಪಾಂಡೆ ಅವರು ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಆರ್.ವಿ. ದೇಶಪಾಂಡೆ ಅವರು ರಾಜು ಪೆಜೋಳ್ಳಿ ಅವರ ಕ್ರೀಡಾಪ್ರೇಮ ಮತ್ತು ಸಂಘಟನಾ ಸಾಮರ್ಥ್ಯ ಅತ್ಯಂತ ಶ್ಲಾಘನೀಯವಾಗಿದ್ದು, ಪಂದ್ಯಾವಳಿಯನ್ನು ಅತ್ಯಂತ ಅಚ್ಚುಕಟ್ಟಾಗಿ ಹಾಗೂ ಶಿಸ್ತಿನಿಂದ ಆಯೋಜಿಸಿರುವುದು ಪ್ರಶಂಸನೀಯ ಎಂದರು.