ಜಿಲ್ಲೆಯ ಮೂರು ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಚಿಗೆ ಏರಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಲಾಗಿದೆ ಎಂದು ಪೌರಾಡಳಿತ ಸಚಿವ ರಹೀಮ್ ಖಾನ್ ಅವರು ತಿಳಿಸಿದರು. ಸಂಪುಟದಲ್ಲಿ ಚರ್ಚಿಸಿದ ಬಳಿಕ ಅಧಿಕೃತವಾಗಿ ಅನುಮೋದನೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಹುಲಸೂರು ಬೀದರ್ ತಾಲೂಕಿನ ಕಮಠಾಣಾ, ಚಿಟಗುಪ್ಪ ತಾಲೂಕು ಮನ್ನಾಎಖೆಳ್ಳಿ 3 ಗ್ರಾಮ ಪಂಚಾಯ್ತಿಗಳು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿದ್ದು ಇನ್ನು ಮುಂದೆ ಅಭಿವೃದ್ಧಿ ವೇಗ ಹೆಚ್ಚಿಲಿದೆ ಎಂದು ಸಚಿವ ರಹೀಮ್ ಖಾನ್ ಅವರು ಗುರುವಾರ ರಾತ್ರಿ 7ಕ್ಕೆ ಸುದ್ದಿಗಾರರಿಗೆ ತಿಳಿಸಿದರು.