ಸೊರಬ: ಚಿಕ್ಕಸವಿ ಗ್ರಾಮದ ಅಂಗನವಾಡಿ ಸಹಾಯಕಿಯಿಂದ ಮಗುವಿಗೆ ಬರೆ
Sorab, Shimoga | Oct 31, 2025 ಮಗುವೊಂದಕ್ಕೆ ಕಚ್ಚಿದ್ದ ಎಂಬ ಆ ಹಿನ್ನಲೆ ಇನ್ನೊಂದು ಮಗುವಿಗೆ ಅಂಗನವಾಡಿಯ ಸಹಾಯಕಿ ಬರೆ ಹಾಕಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಿಕ್ಕಸವಿ ಗ್ರಾಮದಲ್ಲಿ ನಡೆದಿದೆ. ಎಂದಿನಂತೆ ಅಂಗನವಾಡಿಗೆ ಹತ್ತು ಮಕ್ಕಳು ಹಾಜರಿದ್ದರು. ಈ ವೇಳೆ ಇಬ್ಬರು ಮಕ್ಕಳು ಜಗಳವಾಡಿಕೊಂಡಿದ್ದಾರೆ. ಇನ್ನೊಬ್ಬ ಮಗುವಿಗೆ ಯೋಧ ಮೂರ್ತಿ ಎಂಬ ಮಗು ಕಚ್ಚಿದಕ್ಕೆ ಕೋಪಗೊಂಡ ಅಂಗನವಾಡಿ ಸಹಾಯಕಿ ಹೇಮಮ್ಮ ಚಾಕುವನ್ನ ಬೆಂಕಿಯಲ್ಲಿ ಕಾಯಿಸಿ ಮೂರುವರೆ ವರ್ಷದ ಯೋಧ ಮೂರ್ತಿ ಎಂಬ ಮಗುವಿಗೆ ಬರೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು,ಮಗುವನ್ನ ಪೋಷಕರು ಸೊರಬ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು ಸರ್ವ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದು, ಈ ಕುರಿತಾದ ಮಾಹಿತಿ ಶುಕ್ರವಾರ ಲಭ್ಯವಾಗಿದೆ.