ಶಿರಸಿ: ಕಲೆಯು ಸಂಸ್ಕೃತಿಕ ಪ್ರೇರಕ : ಲಯನ್ಸ ಸಭಾಂಗಣದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೇಶವ ಹೆಗಡೆ
ಶಿರಸಿ: ಕಲೆಯು ಸಂಸ್ಕೃತಿಗೆ ಪ್ರೇರಕ. ಸಂಸ್ಕೃತಿ ಉಳಿಸುವಂತೆ ಕಲೆ ಇರಬೇಕು ಎಂದು ಪ್ರಸಿದ್ಧ ಯಕ್ಷಗಾನ ಭಾಗವತ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೇಶವ ಹೆಗಡೆ ಕೊಳಗಿ ಹೇಳಿದರು. ಅವರು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಲಯನ್ಸ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡ ಕಲಾ ವೈವಿಧ್ಯತೆಗಳ ಸಮಾಗಮ ಸಾಂಸ್ಕೃತಿಕ ಸೌರಭದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಲೆಯ ಮೂಲಕ ವ್ಯಕ್ತಿಗಳಲ್ಲಿ ನೈತಿಕತೆ ಬಿತ್ತಬೇಕು. ಪೌರಾಣಿಕ ಆಖ್ಯಾನಗಳು ಈ ಕಾರ್ಯ ಮಾಡುತ್ತವೆ. ಯಕ್ಷಗಾನದಲ್ಲೇ ವ್ಯಕ್ತಿ ಹೇಗಿರಬೇಕು, ಹೇಗಿರಬಾರದು ಎಂಬುದನ್ನು ಕಥೆಗಳು ತಿಳಿಸುತ್ತವೆ ಎಂದರು.