ದೇವದುರ್ಗ: ಗಬ್ಬೂರು : ರಾತ್ರಿ ಸುರಿದ ಮಳೆಗೆ ನೆಲಕಚ್ಚಿದ ಭತ್ತ ಸಂಕಷ್ಟದಲ್ಲಿ ರೈತ
ಬೆಳಗಿನ ಜಾವ ಸುರಿದ ಮಳೆಯಿಂದಾಗಿ ರೈತರು ಬೆಳೆದ ಭತ್ತ ನೆಲಕಚ್ಚಿದೆ. ಕೊಯ್ಲಿಗೆ ಬಂದ ಭತ್ತ ಸಂಪೂರ್ಣ ನೆಲಕ್ಕೆ ಬಿದ್ದು, ಭತ್ತದ ಕಾಳು ಮಣ್ಣು ಪಾಲಾದ ಘಟನೆ ಗಬ್ಬೂರು ಗ್ರಾಮದಲ್ಲಿ ಜರುಗಿದೆ. ರಾಯಚೂರು ಕಳೆದ ರಾತ್ರಿ ಉತ್ತಮವಾಗಿ ಮಳೆಯಾಗಿದೆ, ಆದರೆ ಮಳೆರಾಯ ರೈತರಿಗೆ ಸಂಕಷ್ಟೊಂದೊಡ್ಡಿದ್ದಾನೆ. ರೈತರ ಭಕ್ತ ಇನ್ನೇನು ಕೊಯ್ಲಿಗೆ ಬಂದಿತ್ತಿ. ಭತ್ತ ಕಟಾವ್ ಮಾಡಿ ಮಾರುಕಟ್ಟೆಗೆ ಮಾರುವುದಷ್ಟೇ ಉಳಿದಿತ್ತು. ಇದೀಗ ಮಳೆಯಿಂದಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಭಕ್ತ ಸಂಪೂರ್ಣ ನೆಲಕಚ್ಚಿದೆ. ನೆಲಕಚ್ಚಿದ ಭತ್ತಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವುದಿಲ್ಲ ಎಂಬುದು ರೈತರ ಅಳಲಾಗಿದೆ.