ಬಂಗಾರಪೇಟೆ: ಬಂಗಾರಪೇಟೆಯಲ್ಲಿ ಸ್ವಯಂ ಪ್ರೇರಿತ ಬಂದ್ ಬಹುತೇಕ ಯಶಸ್ವಿ
ಬಂಗಾರಪೇಟೆಯಲ್ಲಿ ಸ್ವಯಂ ಪ್ರೇರಿತ ಬಂದ್ ಬಹುತೇಕ ಯಶಸ್ವಿ ಅಂಬೇಡ್ಕರ್ ಆಶಯಗಳ ಪ್ರತಿಪಾದಕ, ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ರವರ ಮೇಲೆ ಶೂ ಎಸೆದ ದೇಶದ್ರೋಶಿ ವಕೀಲ ರಾಕೇಶ್ಕಿಶೋರ್ನನ್ನು ದೇಶದ್ರೋಹ ಕಾಯ್ದೆಯಡಿಯಲ್ಲಿ ಬಂಧಿಸಿ ಗಡಿಪಾರು ಮಾಡುವಂತೆ ಆಗ್ರಹಿಸಿ ಬಂಗಾರಪೇಟೆ ಪಟ್ಟಣದಲ್ಲಿ ಶಾಂತಿಯುತವಾಗಿ ಸ್ವಯಂ ಪ್ರೇರಿತ ಬಂದ್ ಯಶಸ್ವಿಯಾಗಿ ನಡೆಸಿ ಪೊಲೀಸ್ ಉಪಾಧೀಕ್ಷಕ ಲಕ್ಷಮಯ್ಯ ಹಾಗೂ ತಹಸೀಲ್ದಾರ್ ಸುಜಾತ ಮುಖಾಂತರ ಶುಕ್ರವಾರ ಮನವಿ ಪತ್ರ ರಾಷ್ಟ್ರಪತಿ-ರಾಷ್ಟ್ರ ಗೃಹ ಮಂತ್ರಿಗಳಿಗೆ ಸಲ್ಲಿಸಲಾಯಿತು.