ಮಂಗಳೂರು: ಸೆ.23 ರಿಂದ ತಾಜುಲ್ ಉಲಮಾ 12ನೇ ಉರೂಸ್: ಉರ್ವದಲ್ಲಿ ಮದನೀಸ್ ಕೇಂದ್ರ ಸಮಿತಿಯ ಕಾರ್ಯದರ್ಶಿಯಾದ ಬಶೀರ್ ಮದನಿ ಮಾಹಿತಿ
ಮದನಿ ದರ್ಗಾ ಶರೀಫನ್ನು ಕೇಂದ್ರೀಕರಿಸಿ ಕರ್ನಾಟಕದಲ್ಲಿ ಸುಮಾರು 70 ವರ್ಷಗಳ ಕಾಲ ಧಾರ್ಮಿಕ ನೇತೃತ್ವ ವಹಿಸಿದ, ಕನ್ನಡ ನಾಡಿನ ಸಹಸ್ರಾರು ಉಲಮಾಗಳ ಪ್ರೀತಿಯ ಗುರುವರ್ಯರೂ, ವಿದ್ವತ್ತು, ಆರಾಧನೆಗಳಲ್ಲಿ ಶತಮಾನ ಕಂಡ ಅತಿ ಶ್ರೇಷ್ಠರೂ ಆದ ಉಳ್ಳಾಲ ತಂಙಳ್, ಎಂದೇ ಖ್ಯಾತರಾಗಿದ್ದ ಶೈಖುನಾ ತಾಜುಲ್ ಉಲಮಾ ಸಯ್ಯದ್ ಅಬ್ದುರ್ರಹಮಾನ್ ಅಲ್ ಬುಖಾರಿ(ಖ.ಸಿ)ರವರ 12ನೇ ಉರೂಸ್ ಸಮಾರಂಭವು ಕೇರಳದ ಕಣ್ಣೂರು ಜಿಲ್ಲೆಯ ಎಟ್ಟಿಕುಳಂನಲ್ಲಿ ಸೆಪ್ಟೆಂಬರ್ 23,24,25 ದಿನಾಂಕಗಳಲ್ಲಿ ನಡೆಯಲಿದೆ ಎಂದು ಮದನೀಸ್ ಕೇಂದ್ರ ಸಮಿತಿಯ ಕಾರ್ಯದರ್ಶಿಯಾದ ಬಶೀರ್ ಮದನಿ ಕೂಳೂರು ತಿಳಿಸಿದರು.