ವಿಜಯದಶಮಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಹಿನ್ನೆಲೆಯಲ್ಲಿ ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ಆಕರ್ಷಕ ಪಥಸಂಚಲನ ನಡೆಯಿತು. ಧಾರವಾಡ ತಾಲೂಕಿನ ಗರಗ ಮಡಿವಾಳೇಶ್ವರ ಕಲ್ಮಟದಿಂದ ಆರಂಭಗೊಂಡ ಪಥಸಂಚಲನ ಗರಗ ಗ್ರಾಮದ ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದ ವರೆಗೆ ನಡೆಯಿತು. ಭಾರತ ಮಾತೆಗೆ ಜಯವಾಗಲಿ... ಹಿಂದೂ ಹಿಂದೂ ನಾವೆಲ್ಲರೂ ಒಂದು ಜಯಘೋಷ ಹಾಕಿದ ಜನರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥಸಂಚಲನ ಸ್ವಾಗತಿಸಿದರು.