ದಾವಣಗೆರೆ: ರಾಜ್ಯ ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತರ ಓಲೈಕೆ ಖಂಡಿಸಿ ನಗರದಲ್ಲಿ ಕೈಗೆ ಕಪ್ಪು ಬಟ್ಟೆ ಕಟ್ಟಿ, ಮೌನ ಗಣೇಶ ವಿಸರ್ಜನಾ ಮೆರವಣಿಗೆ
ರಾಜ್ಯ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರನ್ನು ಓಲೈಕೆ ಮಾಡಲು ಗಣೇಶ ಹಬ್ಬಕ್ಕೆ ಅನೇಕ ನಿರ್ಬಂಧಗಳನ್ನು ಏರಿದೆ ಎಂದು ಆರೋಪಿಸಿ ಕೈಗೆ ಕಪ್ಪು ಬಟ್ಟೆ ಕಟ್ಟಿ, ಮೌನ ಗಣೇಶ ವಿಸರ್ಜನಾ ಮೆರವಣಿಗೆ ದಾವಣಗೆರೆ ನಗರದಲ್ಲಿ ನಡೆಯಿತು. ನಗರದ ಮಟ್ಟಿಕಲ್ನ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ವಿಸರ್ಜನಾ ಮೆರವಣಿಗೆಯನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು. ರಾಜ್ಯ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾರ ಓಲೈಕೆಗಾಗಿ ಹಿಂದೂಗಳ ಅನೇಕ ಹಬ್ಬಗಳು ಸೇರಿದಂತೆ ಗಣೇಶ ಹಬ್ಬಕ್ಕೆ ಇಲ್ಲ ಸಲ್ಲದ ಅನೇಕ ನಿರ್ಬಂಧಗಳನ್ನು ಏರಿರುವುದನ್ನು ಖಂಡಿಸಿ ಹಿಂದೂ ಮುಖಂಡರು ಮತ್ತು ಯುವಕರು ಕೈಗೆ ಕಪ್ಪು ಬಟ್ಟೆ ಕಟ್ಟಿ, ಮೌನ ಗಣೇಶ ವಿಸರ್ಜನಾ ಮೆರವಣಿಯನ್ನು ನಡೆಸಿದರು.