ಶಿವಮೊಗ್ಗ: ರಾಮೇನಕೊಪ್ಪದಲ್ಲಿ ಹೋರಿ ಹಬ್ಬದ ವೇಳೆ ಹೋರಿ ಎಗರಿ ಯುವಕ ಗಂಭೀರ
ಹೋರಿ ಹಬ್ಬದ ಅಖಾಡ ದಾಟುತ್ತಿದ್ದ ಯುವಕನ ಮೇಲೆ ಹೋರಿ ಹೆಗರಿದ ಪರಿಣಾಮ ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿವಮೊಗ್ಗ ತಾಲೂಕಿನ ರಾಮೇನಕೊಪ್ಪ ಗ್ರಾಮದಲ್ಲಿ ನಡೆದಿದೆ. ದೀಪಾವಳಿ ಹಬ್ಬದ ಬಳಿಕ ಸಂಕ್ರಾಂತಿಯವರೆಗೆ ಮಲೆನಾಡು ಭಾಗದಲ್ಲಿ ಹೋರಿ ಹಬ್ಬವನ್ನು ಆಚರಿಸಲಾಗುತ್ತದೆ. ರಾಮೇನಕೊಪ್ಪದಲ್ಲಿ ನಡೆದ ಹೋರಿ ಹಬ್ಬ ನೋಡಲು ಬಂದಿದ್ದ ಕುಮಾರ ಎಂಬ ಯುವಕನಿಗೆ ಹೋರಿ ಎಗರಿದ ಪರಿಣಾಮ ಆತ ಗಂಭೀರವಾಗಿ ಗಾಯಗೊಂಡಿದ್ದಾನೆ ಘಟನೆಯ ವಿಡಿಯೋ ವೈರಲ್ ಆಗಿದ್ದು, ಭಾನುವಾರ ವಿಡಿಯೋ ಲಭ್ಯವಾಗಿದೆ. ಗಾಯಾಳು ಕುಮಾರ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ.