ಬೆಂಗಳೂರು ಉತ್ತರ: 'ಆಪರೇಷನ್ ಸಿಂಧೂರ್' ಯಶಸ್ವಿ ಹಿನ್ನೆಲೆ ಬೆಂಗಳೂರಿನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ
ಭಾರತದ ಆಪರೇಷನ್ ಸಿಂಧೂರ್ ಸಕ್ಸಸ್ ಹಿನ್ನೆಲೆ ಈ ಯಶಸ್ವಿ ಕಾರ್ಯಚರಣೆಗೆ ವಿಶೇಷ ಪೂಜೆ ನೆರವೇರಿಸಲಾಯ್ತು. ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯಿಂದ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸಲಾಯ್ತು. ಭಾರತೀಯ ಯೋಧರಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಯ್ತು. ಮೇ 7ರಂದು ಸಂಜೆ 7ಗಂಟೆ ಸುಮಾರಿಗೆ ಬೆಂಗಳೂರಿನ ಬಸವನಗುಡಿಯಲ್ಲಿರುವ ಶ್ರೀ ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಯೋಧರಿಗೆ, ದೇಶದ ಒಳಿತಿಗಾಗಿ ಪೂಜೆ ಸಲ್ಲಿಸಲಾಯಿತು.. ಆಂಜನೇಯ ಹಾಗೂ ಶ್ರೀ ಕೋದಂಡರಾಮಸ್ವಾಮಿ ಗೆ ವಿಶೇಷ ಪ್ರಾರ್ಥನೆ ಪೂಜೆ ಸಲ್ಲಿಸಲಾಯಿತು..