ನಗರದ ತಿಮ್ಮಪೂರ ಪೇಟೆಯಲ್ಲಿ ಷೇರ್ ಮಾರ್ಕೆಟಿಂಗ್ ಹೆಸರಿನಲ್ಲಿ 44 ಲಕ್ಷ ರೂ. ಪಡೆದು ವಂಚನೆ ಮಾಡಿದ್ದು, ಹಣ ಮರು ಪಾವತಿಸುವಂತೆ ಕೇಳಿದ್ದಕ್ಕೆ ಹಣ ನೀಡಿದೇ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ರವಿ ಆರೋಪಿಸಿದರು. ಚೇತನ್ ಕಡಗೋಳ, ಶರಣಪ್ಪ ಕಡಗೋಳ ಹಾಗೂ ಅನಿತಾ ಕಡಗೋಳ ವಿರುದ್ದ ಪ್ರಕರಣ ದಾಖಲಿಸಿದರೂ ರಾಜರೋಚವಾಗಿ ತಿರಗಾಡುತ್ತಿದ್ದರು, ಆರೋಪಿಗಳನ್ನು ಪೊಲೀಸರು ಬಂಧಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ವಂಚನೆ ಹಾಗೂ ಹಲ್ಲೆಗೆ ಒಳಗಾದ ರವಿ.ಕೆ ಆರೋಪಿಸಿದರು.