ಹಾಸನ: ನಗರದ ಡಿಸಿ ಕಚೇರಿ ಎದುರಿನ ವಿಶ್ವಕರ್ಮ ವೃತ್ತದ ಬಳಿ ಬೈಕ್ ಗೆ ಕಾರು ಡಿಕ್ಕಿ: ಬೈಕ್ ಸವಾರರಿಗೆ ಗಾಯ
Hassan, Hassan | Oct 5, 2025 ಹಾಸನ ಡಿಸಿ ಕಚೇರಿ ಎದುರಿನ ವಿಶ್ವಕರ್ಮ ವೃತ್ತದ ಬಳಿ ಮುಂದೆ ಸಾಗುತ್ತಿದ್ದ ಬೈಕ್ ಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರಿಗೆ ಗಾಯಗಳಗಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. 23 BHO 163E ನಂಬರಿನ ಕಾರು ಮುಂದೆ ಸಾಗುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ ಈ ವೇಳೆ ಬೈಕ್ ಸವಾರರು ಕೆಳಕ್ಕೆ ಬಿದ್ದರೂ ಕಾರು ಚಲಾಯಿಸುತ್ತಿದ್ದ ಮಹಿಳೆ ಕರನ್ನು.ಮುಂದಕ್ಕೆ ಚಲಾಯಿಸಿಲ್ದಾಳೆ ಈ ವೇಳೆ ಬೈಕಿನಲ್ಲಿ ಕುಳಿತಿದ್ದ ಇಬ್ಬರೂ ಉಜ್ಜಿಕೊಂಡು.ಹೋಗಿದ್ದು ಕಾಲುಗಳಿಗೆ ಗಾಯಗಳಾಗಿವೆ ಈ ವೇಳೆ ಸ್ಥಳೀಯರು ಜಮಾಯಿಸಿ ಮಹಿಳೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು, ಈ ವೇಳೆ ಮಹಿಳೆ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು.