ಮಂಡ್ಯ: ನಗರದಲ್ಲಿ ಪರವಾನಿಗೆ ಇಲ್ಲದೆ ಶೇಖರಿಸಿದ್ದ 49.6 ಟನ್ ರಸಗೂಬ್ಬರ ಜಪ್ತಿ ಮಾಡಿದ ಕೃಷಿ ಅಧಿಕಾರಿಗಳು
Mandya, Mandya | Oct 3, 2025 ಪರವಾನಿಗೆ ಇಲ್ಲದೆ ಶೇಖರಿಸಿದ್ದ 49.6 ಟನ್ ರಸಗೊಬ್ಬರವನ್ನು ಜಪ್ತಿ ಮಾಡಿದ ಕೃಷಿ ಅಧಿಕಾರಿಗಳು ಮಾರಾಟ ಸಂಸ್ಥೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬೆಂಗಳೂರು ಜಾಗೃತ ಕೋಶದ ಅಪರ ನಿರ್ದೇಶಕ ದೇವರಾಜು, ಮೈಸೂರು ಉಪ ವಿಭಾಗದ ಜಂಟಿ ಕೃಷಿ ನಿರ್ದೇಶಕರ ಕಛೇರಿಯ ಉಪ ಕೃಷಿ ನಿರ್ದೇಶಕಿ ಮಮತ ಹೆಚ್.ಎನ್ ಮತ್ತು ಸಹಾಯಕ ಕೃಷಿ ನಿರ್ದೇಶಕ ಯಾದವ ಬಾಬು, ಮಂಡ್ಯ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕಿ ಸುನೀತ, ಜಿಲ್ಲಾ ರಸಗೊಬ್ಬರ ಪರಿವೀಕ್ಷಕ ಚನ್ನಕೇಶವಮೂರ್ತಿ ಹೆಚ್ (ಜಾರಿದಳ) ಅವರು ಸೆ.29 ರಂದು ಮಂಡ್ಯದಲ್ಲಿರುವ ಟ್ವೀನ್ ಗೋಡಾನ್ ಷುಗರ್ ಟೌನ್ ರಸಗೊಬ್ಬರ ಗೋದಾಮಿಗೆ ಭೇಟಿ ನೀಡಿ ಪರಿಶಿಲನೆ ನಡೆಸಿದಾಗ ಅಕ್ರಮ ದಾಸ್ತಾನು ಪತ್ತೆಯಾಗಿದೆ. M/S GUJARATH STATE FERTILIZERS AND CHEMICLES LTD ಸಂಸ್ಥೆ ರಸಗೊಬ್ಬರ ಇದಾಗಿದೆ.