ಕಲಬುರಗಿ: ನ1 ರಂದು ಉ ಕ ಪ್ರತ್ಯೇಕ ರಾಜ್ಯಕ್ಕಾಗಿ ಪ್ರತ್ಯೇಕ ಧ್ವಜಾರೋಹಣ: ನಗರದಲ್ಲಿ ಕರುನಾಡು ಹೋರಾಟ ಸಮಿತಿ
ಕಲಬುರಗಿ : ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕೆ ಆಗ್ರಹಿಸಿ ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವ ದಿನದಂದು ಪ್ರತ್ಯೇಕ ಧ್ವಜಾರೋಹಣ ನೆರವೇರಿಸಲಾಗುವುದೆಂದು ಕರುನಾಡು ಹೋರಾಟ ಸಮಿತಿ ಅಧ್ಯಕ್ಷ ಪಾಶಾಮಿಯಾ ಹೀರಾಪುರ ಹೇಳಿದ್ದಾರೆ. ಅಕ್ಟೋಬರ್ 30 ರಂದು ಬೆಳಗ್ಗೆ 10 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗಕ್ಕೆ 371(J) ಕಲಂ ನೀಡಿದ್ರು, ಕೆಕೆಆರ್‌ಡಿಬಿ ಮಂಡಳಿಗೆ ವಾರ್ಷಿಕ ₹5 ಸಾವಿರ ಕೋಟಿ ನೀಡ್ತಿದ್ರು ಸಹ ಈ ಭಾಗ ಸಮಗ್ರ ಅಭಿವೃದ್ಧಿ ಹೊಂದುವಲ್ಲಿ ಹಿಂದೆ ಬಿದ್ದಿದ್ದೆ.. ಹೀಗಾಗಿ ಸರ್ಕಾರದಿಂದ ಈ ಭಾಗದ ನಿರ್ಲಕ್ಷ್ಯ ಖಂಡಿಸಿ ನವೆಂಬರ್ 1 ರಂದು ಸರ್ಧಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪ್ರತ್ಯೇಕ ಧ್ವಜಾರೋಹಣ ನೆರವೇರಿಸಲಾಗುತ್ತೆಂದು ಪಾಶಾಮಿಯಾ ಹೀರಾಪುರ ಹೇಳಿದ್ದಾರೆ