ಸಾಗರ: ಸಮಯ ಪ್ರಜ್ಞೆ ಮೆರೆದು ಚಾಲಕನ ಪ್ರಾಣ ಕಾಪಾಡಿದ ಕಲ್ಕೆರೆ ಗ್ರಾಮದ ಮಧು ಎಂ.ಆರ್ ಗೆ ಶೌರ್ಯ ಪ್ರಶಸ್ತಿ
Sagar, Shimoga | Nov 27, 2025 ರಾಮಚಂದ್ರ ಮತ್ತು ಸುಶೀಲಾ ರವರ ಮಗನಾದ ಎಂ ಆರ್ ಮಧು ಎಡೆಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವೇಳೆ ತನ್ನ ಮನೆಯ ಎದುರಿನ ಗದ್ದೆಯಲ್ಲಿ ಭತ್ತದ ಹುಲ್ಲು ಪಿಂಡಿ ಕಟ್ಟುವ ಯಂತ್ರದ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಶಿಕಾರಿಪುರ ತಾಲೂಕಿನ ಬನ್ನೂರು ಗ್ರಾಮದ ಮದನ್ ಎಂಬುವರ ಕೈಯು ಆಕಸ್ಮಿಕವಾಗಿ ಯಂತ್ರಕ್ಕೆ ಸಿಲುಕಿ ಆತ ಜೋರಾಗಿ ಕೂಗಿ ಕೊಳ್ಳುತ್ತಿದ್ದಾಗ ಮಧು ಎಮ್ ಆರ್ ತಕ್ಷಣ ಸ್ಥಳಕ್ಕೆ ಬಂದು ಟ್ಯಾಕ್ಟರ್ ಮಿಷನ್ ಆಫ್ ಮಾಡುವ ಮೂಲಕ ಯಂತ್ರದ ಒಳಗೆ ಸಿಲುಕಿದ ಕೈಯನ್ನ ಹೊರೆ ತೆಗೆಯುವುದರೊಂದಿಗೆ ಚಾಲಕನ ಪ್ರಾಣ ರಕ್ಷಣೆ ಮಾಡಿರುತ್ತಾನೆ. ಸಮಯ ಪ್ರಜ್ಞೆಯೊಂದಿಗೆ ಚಾಲಕನ ಪ್ರಾಣ ಕಾಪಾಡಿದ ಮಧುಗೆ ಈ ಬಾರಿಯ ಶೌರ್ಯ ಪ್ರಶಸ್ತಿ ಲಭ್ಯವಾಗಿದೆ ಗುರುವಾರ ಈಬಗ್ಗೆ ತಿಳಿದಿದೆ.