ದಾವಣಗೆರೆ: ಎಲ್ಲ ಜಿಲ್ಲೆಯಲ್ಲೂ ಡಿಜೆಗೆ ಅನುಮತಿ ಕೊಟ್ಟಿದ್ದಾರೆ, ನಮಗೂ ಅವಕಾಶ ಕೊಡಿ: ನಗರದಲ್ಲಿ ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷ ಗುರು
ಎಲ್ಲಾ ಜಿಲ್ಲೆಯಲ್ಲೂ ಗಣಪತಿ ವಿಸರ್ಜನಾ ಮೆರವಣಿಗೆಗೆ ಡಿಜೆ ಬಳಸಲು ಅನುಮತಿ ಕೊಟ್ಟಿದ್ದು, ನಮ್ಮ ಜಿಲ್ಲೆಯಲ್ಲೂ ಡಿಜೆ ಬಳಸಲು ಅವಕಾಶ ನೀಡಬೇಕು ಎಂದು ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷ ಜೊಳ್ಳಿ ಗುರು ಮನವಿ ಮಾಡಿದರು. ದಾವಣಗೆರೆ ನಗರದಲ್ಲಿ ಮಂಗಳವಾರ ಸಂಜೆ 5 ಗಂಟೆಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೆ.20ರಂದು ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆಗೆ ಎಲ್ಲ ಜಿಲ್ಲೆಗಳಂತೆ ನಮಗೆ ಡಿಜೆ ಬಳಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.