ತಿಕೋಟಾ: ಬಾಬಾನಗರ ಗ್ರಾಮದಲ್ಲಿ ವಿದ್ಯುತ್ ತಗುಲಿ ಮೃತ ರೈತ ಕುಟುಂಬಕ್ಕೆ ಪರಿಹಾರ ವಿತರಿಸಿದ ಸಚಿವ ಎಂಬಿ ಪಾಟೀಲ್
ವಿದ್ಯುತ್ ಅವಘಡದಿಂದ ಸಾವನಪ್ಪಿರುವ ಕುಟುಂಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ ಪರಿಹಾರ ವಿತರಿಸಿದರು. ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ಬಾಬಾನಗರ ಗ್ರಾಮದ ರೈತರದ ಶ್ರೀಕಾಂತ ಬಿಜಾಪುರ ಹಾಗೂ ರಾಜು ಬಿಜಾಪುರ ಬೆಳೆಗಳಿಗೆ ನೀರು ಹಾಯಿಸಲು ಹೋದ ಸಂದರ್ಭದಲ್ಲಿ ವಿದ್ಯುತ್ ತಂತಿ ತಗುಲಿ ಸಾವನಪ್ಪಿದ್ದರು, ಸೋಮವಾರ ಸಾಯಂಕಾಲ 4ಗಂಟೆ ಸುಮಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ ಮೃತ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿ 5 ಲಕ್ಷ ಪರಿಹಾರವನ್ನು ವಿತರಿಸಿದರು. ಇನ್ನು ಸರ್ಕಾರದೊಂದಿಗೆ ಮಾತನಾಡಿ ಸೂಕ್ತ ಉದ್ಯೋಗ ಕಲ್ಪಿಸುವ ಭರವಸೆಯನ್ನು ನೀಡಿದರು.