ಮಳವಳ್ಳಿ: ಹಲಗೂರಿನಲ್ಲಿ ಹಲಗೂರು ಹೋಬಳಿ ಸರ್ಕಾರಿ ನೌಕರರ ಮತ್ತು ಬಳಕೆದಾರರ ಸಹಕಾರ ಸಂಘದ ಆವರಣದಲ್ಲಿ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ
ಹಲಗೂರಿನ ಚನ್ನಪಟ್ಟಣ ರಸ್ತೆಯಲ್ಲಿರುವ ಹಲಗೂರು ಹೋಬಳಿ ಸರ್ಕಾರಿ ನೌಕರರ ಮತ್ತು ಬಳಕೆದಾರರ ಸಹಕಾರ ಸಂಘದ ಆವರಣದಲ್ಲಿ 2024 25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಜರುಗಿತು. ಕಾರ್ಯಕ್ರಮವನ್ನು ಮಂಡ್ಯ ಶಿಕ್ಷಣ ಇಲಾಖೆಯ ನಿವೃತ್ತ ವಿಷಯ ಪರಿವೀಕ್ಷಕರಾದ ಎಸ್. ಲೋಕೇಶ್ ಅವರು ಉದ್ಘಾಟಿಸಿ ಮಾತನಾಡಿ, ತರಗತಿಯ ನಾಲ್ಕು ಗೋಡೆಗಳ ಮಧ್ಯೆ ಪಾಠ ಮಾಡಿ ಸಮಾಜವನ್ನು ತಿದ್ದುವ ಒಂದು ಪ್ರಭಾವಿ ವಲಯವನ್ನು ಸೃಷ್ಟಿ ಮಾಡುವ ಶಕ್ತಿ ಇರುವುದು ಶಿಕ್ಷಣ ಕ್ಷೇತ್ರಕ್ಕೆ ಮಾತ್ರ ಎಂದರು. ಇದೇ ಸಂದರ್ಭದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಬೋರೇಗೌಡರು ವಹಿಸಿದ್ದರು. ಕೆ.ಪುಟ್ಟರಾಜು ವಾರ್ಷಿಕ ವರದಿಯನ್ನು ಭಾನುವಾರ ಸಂಜೆ 4