ಹುಮ್ನಾಬಾದ್: ಜನತಾನಗರ ಬಳಿ ಕಾರುಡಿಕ್ಕಿ ಆಟೋ ಟ್ರೇಲಿಯಲಿದ್ದ ಕೂಲಿ ಕಾರ್ಮಿಕ ಸಾವು, ಇಬ್ಬರು ಗಂಭೀರ ಗಾಯ
Homnabad, Bidar | Sep 15, 2025 ಕಾರು ಡಿಕ್ಕಿ ಹೊಡೆದ ಪರಿಣಾಮ ಆಟೋ ಟ್ಯಾಲಿಯಲ್ಲಿದ್ದ ಪ್ರಯಾಣಿಕ ಮೃತಪಟ್ಟು ಇಬ್ಬರು ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಹುಡುಗಿ ಹತ್ತಿರದ ಜನತಾ ನಗರದ ಬಳಿ ಭಾನುವಾರ ರಾತ್ರಿ 8ಕ್ಕೆ ಸಂಭವಿಸಿದೆ. ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ಹುಡುಗಿ ಹತ್ತಿರದ ರಾಮನಗರ ನಿವಾಸಿ ಕೂಲಿ ಕಾರ್ಮಿಕ ಆನಂದ್ ಕರೆಪ್ಪ ಉದ್ಗೀರೆ (28) ಎಂದು ಗುರುತಿಸಲಾಗಿದೆ. ಗಾಯಡುಗಳನ್ನು ರಾಮನಗರದ ಶರಣಪ್ಪ ಪೇಂಟಿಲ್ಲಿ ಮತ್ತು ರಾಮ್ ಜಮಾದಾರ್ ಎಂದು ತಿಳಿದುಬಂದಿದೆ.