ಹನೂರು: ಪಂಚ ಗ್ಯಾರಂಟಿ ಯೋಜನೆಗಳ ಅನುಭವ ಚಿತ್ರೀಕರಣಕ್ಕೆ ರಾಜ್ಯಾದ್ಯಕ್ಷ ಎಚ್.ಎಂ. ರೇವಣ್ಣ ಚಾಲನೆ
ಹನೂರು: ಸರಕಾರ ಪಂಚ ಗ್ಯಾರಂಟಿ ಯೋಜನೆಗಳ ಅನುಭವ ಚಿತ್ರೀಕರಣಕ್ಕೆ ಹನೂರು ತಾಲೂಕಿನ ಮಹದೇಶ್ವರ ಬೆಟ್ಟದಲ್ಲಿ ಸೋವಾರದಂದುಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಜ್ಯಾಧ್ಯಕ್ಷ ಎಚ್.ಎಂ. ರೇವಣ್ಣ ಚಾಲನೆನೀಡಿದರು. ಆತ್ಮತೃಪ್ತಿ ಟ್ರಸ್ಟ್ (ರಿ.) ಕಡೂರು ಸಂಸ್ಥೆ ವತಿಯಿಂದ ಚಾಮರಾಜನಗರ ಜಿಲ್ಲೆಯಾದ್ಯಂತ ಫಲಾನುಭವಿಗಳ ನೈಜ ಅನುಭವಗಳಾಧಾರಿತ ಸಾಕ್ಷ್ಯಚಿತ್ರ ಹಾಗೂ ಕೃತಿ ತಯಾರಿಸಲಾಗುತ್ತಿದೆ. ಈ ಚಿತ್ರೀಕರಣಕ್ಕೆ ಮಹದೇಶ್ವರ ಬೆಟ್ಟದಲ್ಲಿ ಚಾಲನೆ ನೀಡಿದ ಬಳಿಕ ರೇವಣ್ಣ ಅವರು ಮಾತನಾಡಿ ಗ್ಯಾರಂಟಿ ಯೋಜನೆಗಳು ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಬದಲಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಒಮ್ಮೆ ಮೋದಿ ಪರವಾಗಿ ಮಾತನಾಡುತ್ತಿದ್ದವರು ಈ ಗ್ಯಾರೆಂಟಿ ಯೋಜನೆಯಿಂದ ಸಿದ್ದರಾಮಯ್ಯರವರ ಬಗ್ಗೆ ಮಾತನಾಡುವಂತಾಗಿದೆ ಎಂದರು