ಬೆಂಗಳೂರಿನಲ್ಲಿ 2026ರ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು. ಇಂದಿರಾನಗರದ ಪಬ್ಗಳು ಪಾರ್ಟಿ ಪ್ರಿಯರಿಂದ ತುಂಬಿ ತುಳುಕುತ್ತಿದ್ದವು. ಈ ಸಂದರ್ಭದಲ್ಲಿ, ಬುಧವಾರ ಮಧ್ಯರಾತ್ರಿ ಇಂದಿರಾನಗರದ ಓಪೇರಾ ಜಂಕ್ಷನ್ ಬಳಿ, ಸಂಪೂರ್ಣ ಮದ್ಯಪಾನ ಮಾಡಿದ್ದ ವ್ಯಕ್ತಿಯೊಬ್ಬ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದಾನೆ. ಪೊಲೀಸರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಆತನಿಗೆ, ಪೊಲೀಸ್ ಇನ್ಸ್ಪೆಕ್ಟರ್ರೊಬ್ಬರು ಕಪಾಳಕ್ಕೆ ಹೊಡೆದು, ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಈ ಘಟನೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ಗಲಾಟೆ ಉಂಟಾಯಿತು.