ಚಿತ್ರದುರ್ಗ: ಕ್ರಷರ್ ಸ್ಥಗಿತಕ್ಕೆ ಚಿತ್ರದುರ್ಗದಲ್ಲಿ ಬಂಡೇಹಟ್ಟಿ ಗ್ರಾಮಸ್ಥರ ಒತ್ತಾಯ
ಬಂಡೆಹಟ್ಟಿ ಗ್ರಾಮದಲ್ಲಿ ಜಲ್ಲಿ ಕ್ರಶರ್ ನಿಂದ ಹತ್ತಾರು ಸಮಸ್ಯೆಗಳು ಉಂಟಾಗುತ್ತಿದ್ದು, ಕೂಡಲೇ ಕ್ರಶರ್ ಸ್ಥಗಿತ ಮಾಡುವಂತೆ ಬಂಡೆಹಟ್ಟಿ ಗ್ರಾಮಸ್ಥರು ಸೋಮವಾರ ಮಧ್ಯಾಹ್ನ 3 ಗಂಟೆಗೆ ಪ್ರತಿಭಟನೆ ನಡೆಸಿದರು. ಗ್ರಾಮದ ಹೊರಭಾಗದಲ್ಲಿ ಬೃಹತ್ ಹೆಬ್ಬಂಡೆಯಲ್ಲಿ ಕ್ರಶರ್ ನಡೆಸುತ್ತಿದ್ದಾರೆ. ಪ್ರತಿ ನಿತ್ಯವೂ ಜಲ್ಲಿ ಕ್ರಷರ್ ನಲ್ಲಿ ಸಿಡಿ ಮದ್ದು ಸ್ಪೋಟಿಸುವುದರಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ ಎಂದು ಆರೋಪಿಸಿದರು. ಅಲ್ಲದೆ ಗ್ರಾಮದಲ್ಲಿ ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದು, ಶಾಲೆಯ ಕೊಠಡಿಗಳು ಕೂಡಾ ಬಿರುಕು ಬಿಟ್ಟಿದೆ. ಸ್ಪೋಟದ ತೀವ್ರತೆಗೆ ವಾಟರ್ ಟ್ಯಾಂಕ್ ಕೂಡಾ ಬಿರುಕು ಬಿಟ್ಟಿದ್ದು, ಗ್ರಾಮದಲ್ಲಿ ಆತಂಖದ ವಾತಾವರಣ ನಿರ್ಮಾಣವಾಗಿದೆ ಎಂದರು