Public App Logo
Jansamasya
Delhi
Viral
Jharkhand
���ेट्रोल
���िल्ली
���िरफ्तार
Breakingnews
Madhya_pradesh
Pmmodi
Rahulgandhi
Haryana
Uttarpradesh
Jdu
Sambalpur
Cyclone
���ादी
Crimenews
Bareilly
Bcci
Agra
Breaking
Aimim
Railway
Biharnews
Fatehpur
Kanganaranaut
Amitshah
Meerut
Fire

ಶಿರಸಿ: ನೆಮ್ಮದಿ ಕುಟೀರದಲ್ಲಿ ಶಿರಸಿ ಸಾರ್ವಜನಿಕ ಆಸ್ಪತ್ರೆಗೆ ಸಂಬಂಧಿಸಿ ಹೋರಾಟಕ್ಕೆ ನಿರ್ಧಾರ

Sirsi, Uttara Kannada | Jun 14, 2025
ಶಿರಸಿ: ಇಲ್ಲಿನ ಪಂಡಿತ್ ಸಾರ್ವಜನಿಕ ಆಸ್ಪತ್ರೆಗೆ ಸಂಬಂಧಿಸಿ ಈ ಹಿಂದಿನ ಸರ್ಕಾರದ ಆದೇಶದಂತೆಯೇ ಎಲ್ಲ ಕಾಮಗಾರಿಗಳು, ಯಂತ್ರೋಪಕರಣಗಳ ಖರೀದಿ ಹಾಗು ವೈದ್ಯರ ನೇಮಕ ಪ್ರಕ್ರಿಯೆಯನ್ನು ತುರ್ತಾಗಿ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಸಮಾನ ಮನಸ್ಕರ ಸಮಿತಿಯನ್ನು ರಚಿಸಿ, ಸಮಿತಿಯ ಎಲ್ಲರ ಜೊತೆಗೂಡಿ ಕ್ಷೇತ್ರದ ಶಾಸಕರು, ಉಸ್ತುವಾರಿ ಸಚಿವರು, ಮಂತ್ರಿಗಳನ್ನು ಭೇಟಿ ಮಾಡಿ, ಮನವಿ ನೀಡಿ ಸರಕಾರದ ಮೇಲೆ ಒತ್ತಡ ತರುವ ಎಲ್ಲ ಪ್ರಯತ್ನ ಮಾಡುವ ನಿರ್ಧಾರವನ್ನು ಒಕ್ಕೊರಲಾಗಿ ಕೈಗೊಳ್ಳಲಾಯಿತು. ಶನಿವಾರ ನಗರದ ನೆಮ್ಮದಿ ಕುಟೀರದಲ್ಲಿ ಅನಂತಮೂರ್ತಿ ಹೆಗಡೆ ಅವರ ನೇತೃತ್ವದಲ್ಲಿ ನಡೆದ ಶಿರಸಿ ಸರಕಾರಿ ಆಸ್ಪತ್ರೆಯ ಮುಂದಿನ ಹೋರಾಟದ ರೂಪುರೇಷೆ ಕುರಿತಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲರ ಸಹಮತಿ ಪಡೆಯಲಾಯಿತು.