ಶೃಂಗೇರಿ: ಶಾರದಾ ಶರನ್ನವರಾತ್ರಿಯ ಕೊನೆಯ ದಿನವಾದ ಹುಣ್ಣಿಮೆಯಂದು ಶಾರದಾಂಬೆಗೆ ವಿಶೇಷ ಪೂಜೆ.!
ಶಾರದಾ ಶರನ್ನವರಾತ್ರಿಯ ಕೊನೆಯ ದಿನವಾದ ಹುಣ್ಣಿಮೆಯೆಂದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನೆಲೆಸಿರುವ ಶ್ರೀ ಶಾರದಾಂಬಿಗೆ ವಿಶೇಷ ಪೂಜೆ ಪುನಸ್ಕಾರಗಳನ್ನ ನೆರವೇರಿಸಲಾಯಿತು, ಮಹಾ ಅಭಿಷೇಕ, ಕಮಲಾರ್ಚನೆ ಹಾಗೂ ಮಹಾಮಂಗಳಾರತಿಗಳನ್ನು ನೆರವೇರಿಸಲಾಯಿತು. ಶೃಂಗೇರಿಯ ಕಿರಿಯ ಜಗದ್ಗುರುಗಳು ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿಯನ್ನು ಮಾಡಿದರು ಭಕ್ತ ಸಮೂಹ ಜಗದ್ಗುರುಗಳು, ಮಂಗಳಾರತಿ ಮಾಡುವ ದೃಶ್ಯವನ್ನು ತುಂಬಿಕೊಂಡಿತು.