ಮಂಗಳೂರು: ಮಂಗಳೂರು ನಗರ ದಕ್ಷಿಣದಲ್ಲಿ 2,52, 583 ಮಂದಿ ಮತದಾರರು;ನಗರದಲ್ಲಿಸಹಾಯಕ ಚುನಾವಣಾಧಿಕಾರಿ ಎಂ. ಗಿರೀಶ್ ನಂದನ್
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮಂಗಳೂರು ನಗರ ದಕ್ಷಿಣದಲ್ಲಿ ಒಟ್ಟು 2,52, 583 ಮಂದಿ ಮತ ಚಲಾಯಿಸುವ ಹಕ್ಕನ್ನು ಪಡೆದಿದ್ದಾರೆ. ಈ ಪೈಕಿ ಪುರುಷರು 1,20, 575, ಮಹಿಳೆಯರು 1,31, 958 ಮತ್ತು ಇತರ ಮತದಾರರು 50 ಎಂದು ಸಹಾಯಕ ಚುನಾವಣಾಧಿಕಾರಿ ಎಂ. ಗಿರೀಶ್ ನಂದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಂಗಳೂರು ನಗರ ದಕ್ಷಿಣದಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ 85ವರ್ಷಕ್ಕಿಂತ ಮೇಲ್ಪಟ್ಟ 1,310 ಮಂದಿ ಹಾಗೂ ಪಿಡಬ್ಲ್ಯುಡಿ (ವಿಕಲಚೇತನ) 91 ಮಂದಿ ಸೇರಿದಂತೆ 1,401 ಮಂದಿ ಮನೆಯಲ್ಲಿಯೇ ಮತದಾನ ಮಾಡಲು ಆಸಕ್ತಿ ವಹಿಸಿ ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿ ಗಿರೀಶ್ ನಂದನ್ ಮಾಹಿತಿ ನೀಡಿದ್ದಾರೆ.