ಭಾರತದ ಐಕ್ಯತೆ, ಅಖಂಡತೆ ಮತ್ತು ಬಲಶಾಲಿ ರಾಷ್ಟ್ರದ ಕನಸನ್ನು ಸಾಕಾರಗೊಳಿಸಿದ ಲೋಹ ಪುರುಷ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಎಸ್ಪಿ ಸಿದ್ಧಾರ್ಥ ಗೋಯಲ್ ರವರ ನೇತೃತ್ವದಲ್ಲಿ ಬಾಗಲಕೋಟೆಯಲ್ಲಿ ಹಾಗೂ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಠಾಣಾಧಿಕಾರಿಯವರ ನೇತೃತ್ವದಲ್ಲಿ “ರನ್ ಫಾರ್ ಯುನಿಟಿ” ಕಾರ್ಯಕ್ರಮವನ್ನು ಹಮ್ಮಿಕೊಂಡು “ಏಕ ಭಾರತ, ಶ್ರೇಷ್ಠ ಭಾರತ” ಎನ್ನುವ ಸಂದೇಶವನ್ನು ಹರಡುವ ಜೊತೆಗೆ ನಶೆ ಮುಕ್ತ ಭಾರತ, ಮಹಿಳೆಯರ ಮತ್ತು ಮಕ್ಕಳ ರಕ್ಷಣೆ, ರಸ್ತೆ ಸಂಚಾರ ಸುರಕ್ಷತೆ ಹಾಗೂ ಸೈಬರ್ ಅಪರಾಧಗಳ ಕುರಿತು ಜಾಗೃತಿ ಮೂಡಿಸಲಾಯಿತು.