ಶೃಂಗೇರಿ: ಶಾರದಾ ಮಠದಲ್ಲಿ ವಿವಿಧ ಪೂಜಾ ಕೈಂಕರ್ಯ.! ಜಗದ್ಗುರುಗಳಿಂದ ಶಾರದಾಂಬೆಗೆ ವಿಶೇಷ ಪೂಜೆ, ಹೋಮ ಹವನ.!
ನವರಾತ್ರಿಯ ಹಿನ್ನೆಲೆ ವಿಜಯದಶಮಿಯ ಅಂಗವಾಗಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶ್ರೀಮಠದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಬುಧವಾರ ಮುಂಜಾನೆಯಿಂದ ಶ್ರೀಮಠ ಹಾಗೂ ಶಾರದಾ ಪೀಠದಲ್ಲಿ ವಿವಿಧ ಪೂಜೆ ಪುನಸ್ಕಾರಗಳು ನಡೆದಿದ್ದು. ಜಗನ್ಮಾತೆ ಶಾರದಾಂಬೆಗೆ ಹಿರಿಯ ಜಗದ್ಗುರುಗಳು ಪೂಜೆಯನ್ನು ಸಲ್ಲಿಸಿದರು. ಇನ್ನು ನವರಾತ್ರಿಯ ಅಂಗವಾಗಿ ಶ್ರೀ ಮಠದ ಆವರಣದಲ್ಲಿ ಕಿರಿಯ ಜಗದ್ಗುರುಗಳ ಸಮ್ಮುಖದಲ್ಲಿ ಚಂಡಿಕಾ ಹೋಮ, ಗಜಾಶ್ವಪೂಜೆ ಹಾಗೂ ಆಯುಧ ಪೂಜೆಗಳನ್ನು ನೆರವೇರಿಸಲಾಯಿತು.