ಶಿಡ್ಲಘಟ್ಟ: ಸಿಎಂ ಸಿದ್ದರಾಮಯ್ಯ ಓಲೈಕೆ ರಾಜಕಾರಣ ಬಿಡಲಿ: ನಗರದ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರ ಗೌಡ ವಾಗ್ದಾಳಿ
ಪಾಕಿಸ್ತಾನದ ಮೇಲೆ ಯುದ್ದ ಅವಶ್ಯಕತೆ ಇಲ್ಲ ಸತ್ತವರು ಫುನಃ ವಾಪಸ್ಸು ಬರ್ತಾರಾ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಶಿಡ್ಲಘಟ್ಟ ಕ್ಷೇತ್ರದ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರ ಗೌಡ ವಾಗ್ದಾಳಿ ನಡೆಸಿದ್ದು ಸಿದ್ದರಾಮಯ್ಯನಿಗೆ ತಲೆ ಕೆಟ್ಟಿದೆ. ಸಿದ್ದರಾಮಯ್ಯ ಗ್ಯಾರೆಂಟಿಗಳು ಕೊಟ್ಟು 136 ಸೀಟು ಗೆದ್ದಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವುದು ಕೇವಲ ಮೂರೇ ರಾಜ್ಯಗಳಲ್ಲಿ. ಸಿದ್ರಾಮಯ್ಯ ಮನೆಯವರಿಗೆ ಪ್ಯಾಂಟ್ ಬಿಚ್ಚಿ ನೋಡಿ ಹತ್ಯೆ ಮಾಡಿದ್ರೆ ಅದರ ನೋವು ಗೊತ್ತಾಗ್ತಿತ್ತು.ಪಾಕಿಸ್ತಾನದಲ್ಲಿರುವ ಮುಸ್ಲಿಂರನ್ನು ಓಲೈಕೆ ಮಾಡುವಷ್ಟರ ಮಟ್ಟಿಗೆ ಓಲೈಕೆ ಮಾಡ್ತಾರೆ ಅಂದ್ರೆ ದುರ್ಧೈವ.ಸಿದ್ದರಾಮಯ್ಯನವರಿಗೆ ಮಾನ ಮರ್ಯ್ಯಾದೆ ಇದ್ರೆ ಓಲೈಕೆ ರಾಜಕಾರಣ ಬಿಡಬೇಕು ಎಂದು ವಾಗ್ದಾಳಿ ನಡೆಸಿದರು.