ಮಂಡ್ಯ: ನಗರದ ಬಸ್ ನಿಲ್ದಾಣದಲ್ಲಿ ರಾಜ್ಯ ಸಾರಿಗೆ ಸಂಸ್ಥೆ ನೌಕರನೊಬ್ಬ ಬಟ್ಟೆ ಕಳಚಿ ಅಸಭ್ಯ ವರ್ತನೆ, ಕೆಲ ಕಾಲ ಮುಜುಗರ
Mandya, Mandya | Sep 17, 2025 ರಾಜ್ಯ ಸಾರಿಗೆ ಇಲಾಖೆ ನೌಕರನೊಬ್ಬ ಬಟ್ಟೆ ಕಳಚಿ ಅಸಭ್ಯವಾಗಿ ವರ್ತಿಸಿ ಕೆಲ ಕಾಲ ಮುಜುಗರ ಉಂಟು ಮಾಡಿದ ಘಟನೆ ನಗರದ ಬಸ್ ನಿಲ್ದಾಣದಲ್ಲಿ ರಾತ್ರಿ 8 ಗಂಟೆ ಸುಮಾರಿನಲ್ಲಿ ಜರುಗಿದೆ. ಬಿಎಂಟಿಸಿ ನೌಕರ ಎಂದು ತಿಳಿದು ಬಂದಿದ್ದು, ಹೆಸರು ತಿಳಿದು ಬಂದಿಲ್ಲ. ಬಸ್ ನಿಲ್ದಾಣದ ಪೊಲೀಸ್ ಚೌಕಿ ಪಕ್ಕದಲ್ಲಿ ಮದ್ಯ ಸೇವನೆ ಮಾಡಿ ಬಂದು ಪ್ಯಾಂಟ್, ಶಟ್೯ ಕಳಚಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಮಹಿಳೆಯರು, ಸಾರ್ವಜನಿಕರು ಮುಜುಗರಗೊಂಡು ದೂರ ಹೋಗಿ ಸಿಬ್ಬಂದಿಯ ವರ್ತನೆಗೆ ಆಕ್ರೋಶಗೊಂಡಿದ್ದಾರೆ. ಮೇಲು ಉಡುಪು ಕಳಚಿಟ್ಟು ಕೂತ ಸಿಬ್ಬಂದಿ ಸಿಳ್ಳೆ ಹೊಡೆದು ಕೆಲ ಕಾಲ ಗದ್ದಲ ಎಬ್ಬಿಸಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ನಗರ ಪಶ್ಚಿಮ ಠಾಣೆ ಪೊಲೀಸರು ವ್ಯಕ್ತಿಯನ್ನು ಠಾಣೆಗೆ ಕರೆದೊಯ್ದಿದ್ದಾರೆ.