ಕಡಬ: ನೆಟ್ಟಣ ಸಮೀಪ ಸ್ಕೂಟರ್ ಸವಾರನ ಮೇಲೆ ಕೆಸರು: ಸವಾರನಿಂದ ಆಕ್ರೋಶ
ಕೆಎಸ್ಆರ್ಟಿಸಿ ಬಸ್ನಿಂದ ತನ್ನ ಸ್ಕೂಟರ್ ಮೇಲೆ ಕೆಸರು ರಾಚಿದ್ದಕ್ಕೆ ಸವಾರನೊಬ್ಬ ಆಕ್ರೋಶ ವ್ಯಕ್ತಪಡಿಸಿದ ಘಟನೆ ಸುಬ್ರಹ್ಮಣ್ಯ-ಕಡಬ ರಾಜ್ಯ ಹೆದ್ದಾರಿಯ ನೆಟ್ಟಣ ಸೇತುವೆ ಸಮೀಪ ನಡೆದಿದೆ. ಕೆಸರು ರಾಚಿದ ಕಾರಣ ಕೆರಳಿದ ಸವಾರ ಬಸ್ ಅನ್ನು ನಿಲ್ಲಿಸಿ, ಕಂಡಕ್ಟರ್ ಮತ್ತು ಚಾಲಕರನ್ನು ತರಾಟೆಗೆ ತೆಗೆದುಕೊಂಡಿದ್ದಾನೆ.