ಮಳವಳ್ಳಿ: ತಾಲ್ಲೂಕಿನ ಕರಲಕಟ್ಟೆ ಗ್ರಾಮದ ಶಂಕರ್ ನಾಗ್ ಆಟೋ ಚಾಲಕರ ಸಂಘದಿಂದ 70 ನೇ ಕನ್ನಡ ರಾಜ್ಯೋತ್ಸವ ಆಚರಣೆ
ಮಳವಳ್ಳಿ : ತಾಲ್ಲೂಕು ಹಲಗೂರು ಸಮೀಪದ ಕರಲಕಟ್ಟೆ ಗ್ರಾಮದ ವೃತ್ತದಲ್ಲಿನ ಶಂಕರ್ ನಾಗ್ ಆಟೋ ಚಾಲಕರ ಸಂಘದ ವತಿಯಿಂದ 70ನೇ ವರ್ಷದ ಕನ್ನಡ ರಾಜ್ಯೋತ್ಸ ವವನ್ನು ಸಂಭ್ರಮದಿಂದ ಆಚರಿಸ ಲಾಯಿತು. ಬುಧವಾರ ಸಾಯಂಕಾಲ 5.30 ರ ಸಮಯದಲ್ಲಿ ಮಹದೇಶ್ವರ ದೇವಸ್ಥಾನದ ಬಳಿಯಿಂದ ತಾಯಿ ಭುವನೇಶ್ವರಿ ಮತ್ತು ದೇವರ ಕರಗಗಳಿಗೆ ಪೂಜೆ ಸಲ್ಲಿಸಿ ವೀರಗಾಸೆ ಕುಣಿತ ಶಾಲಾ ವಿದ್ಯಾರ್ಥಿಗಳ ಕುಂಭಮೇಳದೊ ಡನೆ ಮೆರವಣಿಗೆ ಮುಖಾಂತರ ಆಟೋ ನಿಲ್ದಾಣಕ್ಕೆ ಬಂದು ನಂತರ ವೇದಿಕೆ ಕಾರ್ಯಕ್ರಮ ನಡೆಯಿತು. ಬ್ಯಾಡರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಚಿಕ್ಕರಾಜು ಕನ್ನಡ ಧ್ವಜಾರೋಹಣವನ್ನು ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.