ಸಿಂಧನೂರು: ಮಸ್ಕಿ : 7 ಜಿಲ್ಲೆಗೆ 3.50 ಖರ್ಚು ಮಾಡಿ ಕೃಷಿ ಘಟಕಗಳ ಸ್ಥಾಪನೆ
ಸಂಸದರ ಅನುದಾನದಲ್ಲಿ 7 ಜಿಲ್ಲೆಗೆ 3 ಕೋಟಿ 50 ಲಕ್ಷ ಖರ್ಚು ಮಾಡಿ ಕೃಷಿ ಘಟಕಗಳ ಸ್ಥಾಪನೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಗುರುವಾರ 1 ಗಂಟೆ 30 ನಿಮಿಷಕ್ಕೆ ಕಾರ್ಯಕ್ರಮದಲ್ಲಿ ಮಾತನಾಡುತ್ತ ಬೀದರ್ನಲ್ಲಿ ಸೋಯಾ, ಕಲಬುರ್ಗಿಜಿಲ್ಲೆಯಲ್ಲಿ ಜೋಳದ ಪಾಪ್ಕಾರ್ನ್, ಯಾದಗಿರಿ ಜಿಲ್ಲೆಯಲ್ಲಿ ಶೇಂಗಾ ಎಣ್ಣೆ, ಬಳ್ಳಾರಿ ಜಿಲ್ಲೆಯಲ್ಲಿ ಮೆಣಸಿನಕಾಯಿ ಪೌಡರ್,ಕೊಪ್ಪಳ ಜಿಲ್ಲೆಯಲ್ಲಿ ಮಾವಿನ ಹಾಗೂ ಪಪ್ಪಾಯಿ ಸಂಸ್ಕರಣಾ ಘಟಕ, ವಿಜಯನಗರ ಜಿಲ್ಲೆಯಲ್ಲಿ ಕ ಡಲೆಕಾಯಿ, ಚಿಕ್ಕಿ, ಹುಣಸೆ ತೀರು, ರಾಯಚೂರು ಜಿಲ್ಲೆಯಲ್ಲಿ ತೊಗರಿ, ಕಡಲೆ ಬೆಳೆಗಳ ಸಂಸ್ಕರಣಾ ಘಟಕ ಆರಂಭಿಸಲಾಗಿದೆ ಎಂದರು.