ಮಂಗಳೂರು: ಕಳವಾರಿನಲ್ಲಿ ಆಟೊ ಚಾಲಕನಿಗೆ ಹಲ್ಲೆ, ಕೊಲೆ ಬೆದರಿಕೆ; ಪ್ರಕರಣ ದಾಖಲು
ತಂಡವೊಂದು ರಾತ್ರಿ ಹೊತ್ತು ಸಾರ್ವಜನಿಕ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಡೆಯೊಡ್ಡಿರುವುದು ಅಲ್ಲದೆ, ಆಟೊ ಚಾಲಕನಿಗೆ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕಳವಾರಿನ ಆಶ್ರಯ ಕಾಲನಿ ಬಳಿ ವರದಿಯಾಗಿದೆ. ಎ.9ರ ತಡರಾತ್ರಿ ಆಟೊ ಚಾಲಕ ಅಝರುದ್ದೀನ್ ಎಂಬವರು ರಿಕ್ಷಾದಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಕಳವಾರಿನ ಆಶ್ರಯ ಕಾಲನಿ ಅಂಗನವಾಡಿಯ ಬಳಿ ಪ್ರಶಾಂತ್ ಕಳವಾರು, ಗಣೇಶ, ಪುನೀತ್ ಹಾಗೂ ಇತರರು ರಸ್ತೆಯಲ್ಲಿ ಅಡ್ದ ಮಲಗಿ, ರಸ್ತೆ ಸಂಚಾರಕ್ಕೆ ತಡೆಯಾಗಿದ್ದಾರೆ.