ಸಿಂಧನೂರು: ಸಿಂಧನೂರು : ಕೃಷಿಗೆ ಹಾಗೂ ಗ್ರಾಮೀಣ ಭಾರತಕ್ಕೆ ಒತ್ತು ಕೊಡಲಾಗಿದೆ
ಐಟಿಸಿ ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಪುರಿ ಗುರುವಾರ 1 ಗಂಟೆಗೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಬಜೆಟ್ಲ್ಲಿ ಕೃಷಿಗೆ ಹಾಗೂ ಗ್ರಾಮೀಣ ಭಾರತಕ್ಕೆ ಒತ್ತು ಕೊಡಲಾಗಿದೆ. ಕೃಷಿಯನ್ನು ಬದಲಾವಣೆಯತ್ತ ಕೊಂಡೊಯ್ಯಲಾಗುತ್ತಿದೆ. ಇದಕ್ಕೆ ನಬಾರ್ಡ್ಗೆ ಕೃತಜ್ಞತೆ ಹೇಳಬಯಸುತ್ತೇನೆ ಎಂದು ಹೇಳಿದರು. ಡಿಜಿಟಲ್ ಹಂತದಲ್ಲಿ ಇದೊಂದು ಆರಂಭವಾಗಿದೆ. ಬಹಳಷ್ಟು ಬದಲಾವಣೆ ತರುವ ದಿಸೆಯಲ್ಲಿ ಪ್ರಯತ್ನಗಳು ಮಂದುವರಿವೆ. ಮಣ್ಣು ಪರೀಕ್ಷೆಯ ಯಂತ್ರ ಅಳವಡಿಲಾಗುವುದು. ಮಣ್ಣಿನ ಗುಣಮಟ್ಟ ಆಧರಿಸಿ ಅದಕ್ಕೆ ಎಷ್ಟು ಪ್ರಮಾಣದಲ್ಲಿ ರಸಗೊಬ್ಬರ ಹಾಕಬೇಕು ಎನ್ನುವ ಮಾಹಿತಿಯನ್ನೂ ಕೊಡಲಿದೆ ಎಂದರು.