ರಾಯಚೂರು: ಹಾನಿಕಾರಕ ತಂಬಾಕು ಬಳಕೆಯಿಂದ ದೂರವಿರಿ: ಡಾ.ಗುಂಡಮ್ಮ ಸಲಹೆ
4000 ರಾಸಾಯನಿಕಗಳನ್ನು ಹೊಂದಿರುವ ತಂಬಾಕು ಹಾಗೂ ಅದರ ಉತ್ಪನ್ನಗಳನ್ನು ಬಳಸದೆ ಇರಲು ಎಲ್ಲರೂ ತೀರ್ಮಾನಿಸುವ ಮೂಲಕ ಸದೃಢ ಯುವ ಸಮುದಾಯವನ್ನು ರೂಪಿಸಲು ಮುಂದೆ ಬನ್ನಿ ಎಂದು ಸಿಯಾತಲಾಬ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಗುಂಡಮ್ಮ ಅವರು ಕಾಲೇಜು ವಿದ್ಯಾರ್ಥಿಗಳಿಗೆ ವಿನಂತಿಸಿದರು. ಬುಧವಾರ 3 ಗಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಂಬಾಕು ಮುಕ್ತ ಯುವ ಅಭಿಯಾನ 3.0 ಅಡಿಯಲ್ಲಿ ನವೆಂಬರ್ 19ರಂದು ಹಮ್ಮಿಕೊಂಡ ಜಾಗೃತಿ ಕಾರ್ಯಕ್ರಮದಲ್ಲಿ ಆರೋಗ್ಯಕ್ಕೆ ತಂಬಾಕು ಹಾನಿಕಾರಕ ಬಗ್ಗೆ ಹೇಳಿದರು.