ಮಳವಳ್ಳಿ : ತಾಲ್ಲೂಕಿನ ಬೆಳಕವಾಡಿ ಗ್ರಾಮದಲ್ಲಿ ಶನಿವಾರ ಶ್ರೀ. ಭಕ್ತ ಕನಕದಾಸ ಕುರುಬರ ಸಂಘದ ಕುಲದ ಮನೆಯಲ್ಲಿ ಹತ್ತನೇ ವರ್ಷದ ಕನಕ ಜಯಂತಿ ಯನ್ನು ಆಚರಿಸಲಾಯಿತು. ಶನಿವಾರ ಬೆಳಿಗ್ಗೆ 10.30ರ ಸಮಯದಲ್ಲಿ ನಡೆದ ಕಾರ್ಯಕ್ರಮದ ಅಂಗವಾಗಿ ಕನಕ ದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದ ಸಂಘದ ಮುಖಂಡರು ಪದಾಧಿಕಾರಿಗಳು ಗೌರವ ನಮನ ಸಲ್ಲಿಸಿದರು. ನೆರೆದಿದ್ದ ಜನರಿಗೆ ಪ್ರಸಾದ ನೀಡಲಾಯಿತು. ಈ ವೇಳೆ ಕುರುಬ ಸಮಾಜದ ಸಂಘದ ಯಜಮಾನರು ಗ್ರಾಮದ ಮುಖಂಡರ ಹಾಜರಿದ್ದರು.