ದಾಂಡೇಲಿ: ಮಕರ ಸಂಕ್ರಮಣದ ದಿನದಂದು ಗೆಳೆಯರ ಜೊತೆ ಪಿಕ್ನಿಕ್ ಗೆ ಹೋಗಿದ್ದ ದಾಂಡೇಲಿಯ ಗಾಂಧಿನಗರದ ಯುವಕ ಕಾಳಿನದಿ ನೀರಲ್ಲಿ ಈಜಾಡಲು ಹೋಗಿ ಮೃತಪಟ್ಟ ಘಟನೆ ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ನಡೆದಿದ್ದು, ಗುರುವಾರ ಸಂಜೆ ಐದುವರೆ ಗಂಟೆ ಸುಮಾರಿಗೆ ಮೃತ ದೇಹ ಪತ್ತೆಯಾಗಿದೆ. ದಾಂಡೇಲಿಯ ಗಾಂಧಿ ನಗರದ ನವಾಜ್ ಶಬ್ಬೀರ್ ನಾಯಕ ಎಂಬಾತನೇ ಕಾಳಿ ನದಿಯಲ್ಲಿ ಮುಳುಗಿ ಮೃತಪಟ್ಟ ಯುವಕನಾಗಿದ್ದಾನೆ. ಮಕರ ಸಂಕ್ರಾಂತಿಯ ನಿಮಿತ್ತ ಮೌಳಂಗಿಯ ಸಂಗಮ ಪಿಕ್ನಿಕ್ ಪಾಯಿಂಟ್ ಗೆ ಗೆಳೆಯರ ಜೊತೆ ಹೋಗಿದ್ದ ನವಾಜ್ ಶಬ್ಬೀರ್ ನಾಯಕ ಕಾಳಿ ನದಿಯಲ್ಲಿ ಈಜಾಡಲು ಮುಂದಾಗಿದ್ದಾನೆ. ಇದೇ ಸಂದರ್ಭದಲ್ಲಿ ನದಿಯ ಎತ್ತರದ ದಡದಿಂದ ಈಜಾಡಲು ಎಂದು ಹಾರಿದ ನವಾಜ್ ಶಬ್ಬೀರ್ ನದಿಯ ಸುಳಿಗೆ ಸಿಕ್ಕು ಮೇಲೆ ಬರಲಿಲ್ಲ ಎನ್ನಲಾಗಿದೆ.