ಹುಮ್ನಾಬಾದ್: ಹಣ್ಣುಗಳ ಮೇಲೆ ಕೆಮಿಕಲ್ ಸಿಂಪರಿಸಿ ಜೂಸ್ ಮಾರುವವರ ವಿರುದ್ಧ ಕ್ರಮ ಕೈಗೊಳ್ಳಿ : ನಗರದಲ್ಲಿ ಕನ್ನಡ ಸೇನೆ ಕರ್ನಾಟಕದಿಂದ ತಹಶೀಲ್ದಾರಗೆ ಮನವಿ
Homnabad, Bidar | Oct 23, 2025 ಜ್ಯೂಸ್ ಅಂಗಡಿಯವರು ಹಣ್ಣುಗಳ ಮೇಲೆ ಕೆಮಿಕಲ್ ಸಿಂಪಡಿಸಿ ಜೂಸ್ ಮಾರಾಟ ಮಾಡುತ್ತಿದ್ದು ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ, ನಗರದಲ್ಲಿ ಕನ್ನಡ ಸೇನೆ ಕರ್ನಾಟಕ ವತಿಯಿಂದ ಗುರುವಾರ ಮಧ್ಯಾಹ್ನ 12:30ಕ್ಕೆ ತಹಶೀಲ್ದಾರ್ ಮತ್ತು ಪುರಸಭೆ ಮುಖ್ಯ ಅಧಿಕಾರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಈ ವೇಳೆ ಕನ್ನಡ ಸೇನೆ ಕರ್ನಾಟಕ ಸಂಘಟನೆ ಪ್ರಮುಖ ಪದಾಧಿಕಾರಿಗಳು ಹಾಜರಿದ್ದರು.