ಹಿಂದು ಧರ್ಮ ಒಡೆಯುವ ಹುನ್ನಾರ ನಡೆದಿದೆ ಎಂದು ಚಕ್ರವರ್ತಿ ಸೂಲಿಬೆಲೆ ಅವರು ಹೇಳಿದರು. ಕನ್ನೇರಿ ಶ್ರೀಗಳ ಮೇಲೆ ಹಲವು ಕಡೆ ನಿರ್ಬಂಧ ಹೇರುವ ಯತ್ನ ನಡೆದಿದೆ. ಇಡೀ ಹಿಂದು ಸಮಾಜ ಇದನ್ನು ದಿಕ್ಕರಿಸುತ್ತದೆ. ಸ್ವಾಮೀಜಿಯವರಿಗೆ ವಾಕ್ ಸ್ವಾತಂತ್ರ್ಯ ಮತ್ತು ಪ್ರಯಾಣ ಸ್ವಾತಂತ್ರ್ಯಕ್ಕೆ ನಿರ್ಬಂಧ ಹಾಕಲಾಗಿದೆ ಎಂದು ಹೇಳಿದರು. ಬುಧವಾರ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು. ರಾಜ್ಯದಲ್ಲಿ ಸಮಾಜ ಒಡೆಯುವ ಯತ್ನ ವಿಫಲಗೊಂಡಿದೆ. ಹಿಂದು ಸಮಾಜವನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಹೇಳಿದರು