ದಾಂಡೇಲಿ: ಹಳೆ ದಾಂಡೇಲಿ, ಅಲೈಡ್ ಏರಿಯಾ ಮತ್ತು ನಿರ್ಮಲನಗರದಲ್ಲಿ ಅತಿಕ್ರಮಣ ತೆರವುಗೊಳಿಸಿದ ನಗರ ಸಭೆ
ದಾಂಡೇಲಿ : ನಗರದ ಹಳೆ ದಾಂಡೇಲಿ, ಅಲೈಡ್ ಏರಿಯಾ ಮತ್ತು ನಿರ್ಮಲ ನಗರದಲ್ಲಿ ಅತಿಕ್ರಮಿಸಿಕೊಂಡಿದ್ದ ನಗರಸಭೆಯ ಖಾಲಿ ಜಾಗವನ್ನು ತೆರವುಗೊಳಿಸುವ ಕಾರ್ಯಕ್ಕೆ ನಗರಸಭೆ ಚಾಲನೆಯನ್ನು ನೀಡಿದೆ. ನಗರಸಭೆಯ ಪೌರಾಯುಕ್ತರಾದ ವಿವೇಕ್ ಬನ್ನೆ ಅವರ ನೇತೃತ್ವದಲ್ಲಿ ನಗರ ಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಹಕಾರದಲ್ಲಿ ಮಂಗಳವಾರ ಸಂಜೆ 4:00 ಗಂಟೆಯರೆಗೆ ಅತಿಕ್ರಮಿತ ಜಾಗವನ್ನು ತೆರವುಗೊಳಿಸಲಾಯಿತು.