ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ಸ್ಟಾಲ್ ಗೆ ಸಚಿವರು, ಶ್ರೀ ಮುನಿಯಪ್ಪ ಅವರು, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷರು ಶ್ರೀ ಮುರಳಿಧರ್ , ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರು, ಶ್ರೀ ರಾಘವೇಂದ್ರ ರವರು, ಕೃಷಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಸ್ಟಾಲ್ ಅನ್ನು ಉದ್ಘಾಟಿಸಿ,ರಾಗಿ ರಾಶಿ ಪೂಜೆಯನ್ನು ಮಾಡಿ, ಮಾತನಾಡಿದ ಸಚಿವರು, ರೈತರು ಇಲಾಖೆ ವತಿಯಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಸ್ಟಾಲ್ ನಲ್ಲಿ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳನ್ನು ಪ್ರದರ್ಶಿಸಿಲಾಗಿತ್ತು