ಕೊಳ್ಳೇಗಾಲ: ಜಾತಿ-ಸಾಮಾಜಿಕ ಸಮೀಕ್ಷೆ: ಕೊಳ್ಳೇಗಾಲದಲ್ಲಿ ಸಿಬ್ಬಂದಿಯ ಸಮಸ್ಯೆ ಆಲಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ
ರಾಜ್ಯಮಟ್ಟದಲ್ಲಿ ಆರಂಭಗೊಂಡಿರುವ ಜಾತಿ ಹಾಗೂ ಸಾಮಾಜಿಕ ಸಮೀಕ್ಷೆ ಹಿನ್ನಲೆಯಲ್ಲಿ, ಕೊಳ್ಳೇಗಾಲ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ರವರು ಗಣತಿ ಕಾರ್ಯಕ್ಕೆ ನಿಯೋಜಿಸಲಾದ ಸಿಬ್ಬಂದಿಯ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿದರು. ಕೊಳ್ಳೇಗಾಲದಲ್ಲಿ ಗಣತಿಗಾರರು ಸಮೀಕ್ಷೆಗೆ ಅಗತ್ಯವಿರುವ ಪರಿಕರಗಳು ಮತ್ತು ಮಾರ್ಗಸೂಚಿಗಳನ್ನು ಪಡೆಯಲು ಆಗಮಿಸಿದ ಸಂದರ್ಭದಲ್ಲಿ, ಕೆಲವರು ಸ್ಥಳ ನಿಯೋಜನೆ, ತಾಂತ್ರಿಕ ಸಹಾಯ, ಡೇಟಾ ಎಂಟ್ರಿ ಸಂಬಂಧಿತ ಗೊಂದಲಗಳ ಬಗ್ಗೆ ತಮ್ಮ ಅಹವಾಲುಗಳನ್ನು ಸಲ್ಲಿಸಿದರು ಅಧಿಕಾರಿ ಮಂಜುಳಾ ಅವರು ಎಲ್ಲರ ಮಾತುಗಳನ್ನು ಮನವಿಯಿಂದ ಆಲಿಸಿದರು