ಮಂಡ್ಯ: ನ 9ರಂದು ಶಿವಳ್ಳಿ ಗ್ರಾಮದ ಶಾಲೆಯ ಆವರಣದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ: ನಗರದಲ್ಲಿ ಶಾಲೆಯ ಅಧ್ಯಕ್ಷ ಯೋಗಣ್ಣ
Mandya, Mandya | Nov 7, 2025 ಸರೋವರ ಕಿಡ್ಸ್ ವರ್ಲ್ಡ್ & ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ವತಿಯಿಂದ ನ.09 ರ ಬೆಳಿಗ್ಗೆ 10 ಗಂಟೆಗೆ ಮಂಡ್ಯ ತಾಲೂಕಿನ ಶಿವಳ್ಳಿ ಗ್ರಾಮದ ಶಾಲೆಯ ಆವರಣದಲ್ಲಿ ಬೃಹತ್ ಆರೋಗ್ಯ ತಪಾಸಣೆ ಮತ್ತು ಕಣ್ಣಿನ ತಪಾಸಣೆ ಶಿಬಿರ ಆಯೋಜಿಸಲಾಗಿದೆ ಎಂದು ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಹಾಗೂ ಶಾಲೆಯ ಅಧ್ಯಕ್ಷ ಯೋಗಣ್ಣ ತಿಳಿಸಿದರು. ಮಂಡ್ಯನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೃಹತ್ ಆರೋಗ್ಯ ತಪಾಸಣೆ ಮತ್ತು ಕಣ್ಣಿನ ತಪಾಸಣೆ ಶಿಬಿರವು ಜಯ ಕರ್ನಾಟಕ ಸಂಘಟನೆ ಸಹಕಾರದೊಂದಿಗೆ ನಡೆಯುತ್ತಿದೆ ಎಂದರು. ಮೈಸೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆಯ ನುರಿತ ತಜ್ಞರು, ಸಿರಿ ಇಎನ್ಟಿ ಕೇರ್ನ ಡಾ.ಶ್ರೇಯಸ್, ಕೀಲು ಮತ್ತು ಮೂಳೆ ರೋಗ ತಜ್ಞರ ಡಾ.ನಿತಿನ್ ಅವರಿಂದ ಆರೋಗ್ಯ ತಪಾಸಣೆ ನಡೆಯಲಿದೆ. ಹೆಸರಾಂತ ದಿವ್ಯಜ್ಯೋತಿ ನೇತ್ರಾಲ