ಬಸವಕಲ್ಯಾಣ: ರಸ್ತೆ ಬದಿ ವಾಕ್ ಮಾಡುತಿದ್ದ ಇಬ್ಬರು ಯುವಕರಿಗೆ ಬೈಕ್ ಡಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು; ಮಂಠಾಳ ಗ್ರಾಮದ ಬಳಿ ಘಟನೆ
ಬಸವಕಲ್ಯಾಣ: ಸಂಜೆ ಸಮಯದಲ್ಲಿ ರಸ್ತೆ ಬದಿಯಲ್ಲಿ ವಾಕ್ ಮಾಡುತಿದ್ದ ಇಬ್ಬರು ಯುವಕರಿಗೆ ಬೈಕ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಮಂಠಾಳ ಗ್ರಾಮದ ಸಮೀಪ ಜರುಗಿದೆ. ತಾಲೂಕಿನ ಆಲಗೂಡ ಗ್ರಾಮದ ನಿವಾಸಿ ಯಲ್ಲಾಲಿಂಗ ಮನೋಹರ ಗಾವಡೆ(31) ಘಟನೆಯಲ್ಲಿ ಮೃತಪಟ್ಟ ಬೈಕ್ ಸವಾರನಾಗಿದ್ದಾನೆ. ಉರ್ಕಿ ಗ್ರಾಮದ ನಿವಾಸಿ ಸಮರ್ಥ ಎನ್ನುವ ಯುವಕರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಬಸವಕಲ್ಯಾಣ ನಗರದ ಸರ್ಕಾರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರೆಸಲಾಗಿದೆ. ಸುದ್ದಿ ತಿಳಿದ ಮಂಠಾಳ ಸಿಪಿಐ ಅಮೂಲ ಕಾಳೆ, ಪಿಎಸ್ಐ ಸುವರ್ಣ ಮಲಶಟ್ಟಿ ಸೇರಿದಂತೆ ಪೊಲೀಸರ ತಂಡ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದ್ದು, ತನಿಖೆ ಮುಂದುವರೆಸಿದೆ